ಹಳೇ ಪಾತ್ರೆ ಹಳೇ ಕಬುಣ ಹಳೇ paper ತರಾ ಹೊಯ್
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೊಯ್
ಚಂದಿರನ ತೂಕಕೆ ಇಡು ಸಂಜೆಯನು saleಯಿಗೆ ಬಿಡು
ಭೂಮೀನ ಬಾಡಿಗೆ ಕೊಡು ಸಾಕು
ಲೋಕವ ಮೂಟೆ ಕಟ್ಟು ಬಾರಲೇ cycle ಹತ್ತು
ಯಾತಕೆ ದೂಸ್ರಾ ಮಾತು? ಎಲ್ಲಾ time waste
ಲೋಕವ ಮೂಟೆ ಕಟ್ಟು ಬಾರಲೇ cycle ಹತ್ತು
ಯಾತಕೆ ದೂಸ್ರಾ ಮಾತು? ಎಲ್ಲಾ time waste
ಹಳೇ ಪಾತ್ರೆ ಹಳೇ ಕಬುಣ ಹಳೇ paper ತರಾ ಹೊಯ್
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೊಯ್

ನೋಡು ಮುಂಗಾರು ಮಳೆ ಅದರೊಳಗೆ ಹೇಳವ್ನೆ
ಈ ಪ್ರೀತಿಯೆಂದೂ ಅತಿ ಮಧುರ ತ್ಯಾಗ ಅಮರ
ಬೇಡುವೆನು ಓ ಚಿನ್ನ ಮಾಡಿ ಬಿಡು ತ್ಯಾಗಾನ
ನಿಂತುಬಿಡು ಜೋಗದ ಗುಂಡೀಲಿ ಬಿಟ್ಟು ಬಿಡು ನನ್ನನ್ನ
ಹಳೇ ಹುಡುಗಿ ಹೆಸರೇ ತೆಗೆಯದಲೇ ನಿನ ಮುಂದೆ ಸಾಚಾ ಆಗಿರುವೆ
ದಿನ ರಾತ್ರಿ ಮನೆಗೆ ಬರುವೆನು ನಾ ಕೊನೆಯವರೆಗೂ
ಹಳೇ ಪಾತ್ರೆ ಹಳೇ ಕಬುಣ ಹಳೇ paper ತರಾ ಹೊಯ್
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೊಯ್

ನಾ ಒಳ್ಳೇ ರೀತಿಯಲಿ ಹೇಳುವೆನು ಪ್ರೀತಿಯಲಿ
ಹೇಳಿಬಿಡು ತುಂಬಾ frank ಆಗಿ ಪ್ರೀತಿಸುವೆಯಾ
ನೀನಿದ್ದ ತೋಳಿನಲಿ ಕಳೆದೆರಡು ಜನುಮದಲಿ
ಇದು ನೂರು ಜನುಮದ contract-u ಮರೆತಿರುವೆಯಾ
ಕಮ್ಮಿ ಕಣೋ ನೂರು ಜನುಮಗಳು ಬೇಕೆನಗೆ ಕೋಟಿ ಮರಣಗಳು
ಅಪ್ಪಿಹಿಡಿ ನನ್ನ ಬಿಗಿಯಾಗಿ ಗೋರಿಯೊಳಗೂ
ಹಳೇ ಪಾತ್ರೆ ಹಳೇ ಕಬುಣ ಹಳೇ paper ತರಾ ಹೊಯ್
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೊಯ್
ಚಂದಿರನ ತೂಕಕೆ ಇಡು ಸಂಜೆಯನು saleಯಿಗೆ ಬಿಡು
ಭೂಮೀನ ಬಾಡಿಗೆ ಕೊಡು ಸಾಕು
ಲೋಕವ ಮೂಟೆ ಕಟ್ಟು ಬಾರಲೋ cycle ಎತ್ತು
ಯಾತಕೆ ದೂಸ್ರಾ ಮಾತು? ಎಲ್ಲಾ time waste
ಲೋಕವ ಮೂಟೆ ಕಟ್ಟು ಬಾರಲೇ cycle ಹತ್ತು
ಯಾತಕೆ ದೂಸ್ರಾ ಮಾತು? ಎಲ್ಲಾ time waste